RSS

Monthly Archives: ಆಗಷ್ಟ್ 2013

ಪಥದ ಜಾಡಲ್ಲಿ ಕಾದವರ ಉಸಿರು

ದೇವಾಮೃತಗಂಗೆ//ರಘುನಂದನ ಕೆ.

ಕವನವಾಗಬೇಕೆಂದು ಕನವರಿಸಿ ಕವನವಾಗದೇ ಉಳಿದರೂ
ಕವನದಂತೆ ಕಾಣಿಸಿಕೊಳ್ಳುವ ಸಾಲುಗಳು ಹೀಗೆಲ್ಲಾ ಬರೆಯಲ್ಪಟ್ಟಾಗ…

* * * * * * * * 

ಭೋರೆಂದು ಸುರಿದರೂ ಮೀರದಾ ಕಡಲು
ಕಲ್ಲಾಗಿ ಕುಳಿತ ಬದುಕಲ್ಲಿ
ಅಹಲ್ಯೆಯ ಕನಸ ಪಳೆಯುಳಿಕೆ
ಇಂದ್ರಛಾಪದ ಕನವರಿಕೆ

ಹುಟ್ಟರಿಯದ ಬದುಕು ಬಯಲು
ತನ್ನದಲ್ಲದ ಶಪಥಗಳಲ್ಲಿ
ಕರಗಿದ ಕರ್ಣ ಕುಂಡಲ ಹೊಳಪು
ಅಳಿದು ಹೋದವರ ನೆನಪು

ಜೊತೆ ನಡೆದಾಗ ಕಿರುಬೆರಳ ಪುಳಕ
ಅರಮನೆಯ ಅಂತರಂಗದಲ್ಲಿ
ಊರ್ಮಿಳೆಯ ನಿಟ್ಟುಸಿರ ಕಾವು
ಕೊನೆಯಿರದ ವನವಾಸದ ನೋವು

ಸುಂದರಿಯರ ಕನಸಲ್ಲಿ ಚಂದಿರ
ಬುದ್ಧ ನಡೆದ ದಾರಿಯಲ್ಲಿ
ಯಶೋಧರೆಯ ಬಿಸಿಯುಸಿರ ತಾಪ
ಮಂಜು ಕವಿದ ಮುಂಜಾವುಗಳ ಶಾಪ

ಶಬರಿಯ ಒಳಗೊಬ್ಬ ರಾಮ
ಪಥದ ಜಾಡಲ್ಲಿ ಶಬರಿಯ ಪ್ರೇಮ
ಕಾಯೋ ಕಾಯಕದಲ್ಲಿ ಕಾಯ ಕರಗಿತು
ಕಾಲದೊಳಗಿಂದ ಕಾದವರ ಹೆಸರುಳಿಯಿತು

* * * * * * * * 

(ಬಣ್ಣ ಬಣ್ಣದ ಅಕ್ಷರಗಳ, ಚಿತ್ರಗಳಿಂದ ತುಂಬಿದ ಕಲ್ಪನಾ ವಿಹಾರಕ್ಕೆ ಭೇಟಿ ನೀಡಿ –  http://www.samudrateera.blogspot.in/)

Advertisements