RSS

ಶಿಲೆಯಾದಳು ರಾಧೆ…

20 ಮಾರ್ಚ್

ದೇವಾಮೃತಗಂಗೆ//ರಘುನಂದನ ಕೆ.

ರಾಧೆಯ ಮಡಿಲಲಿ ಮಲಗಿದ ಕೊಳಲು
ಮೌನ ರಾಗವ ಧ್ವನಿಸುತಿದೆ
ಮೋಹನನಿಲ್ಲದೆ ರಾಧೆಯ ಮನವು
ವಿರಹದುರಿಯಲಿ ನೋಯುತಿದೆ

ಅತ್ತಿತ್ತ ಸರಿದಾಡುವ ಕಂಗಳು
ಬಾರದ ಕೃಷ್ಣನ ಹುಡುಕುತಿದೆ
ಕೊಳದಲಿ ಕಂಡಾ ಚಂದಿರ ಬಿಂಬದಿ
ಶ್ಯಾಮನ ಮೊಗವು ಕರಗುತಿದೆ

ಮಧುರೆಯ ಸೇರಿದ ಕೃಷ್ಣಗೆ
ರಾಧೆಯ ನೆನಪು ಬಾಡುತಿದೆ
ಪಾಂಚಜನ್ಯದಾ ನಾದದಿ
ಕೊಳಲಾ ಗಾನವು ಮರೆಯುತಿದೆ

ಅಂತಃಪುರದ ಮೋಹದ ತೆರೆಯು
ಬೃಂದಾವನವ ಮುಸುಕುತಿದೆ
ಮಧುರೆಯ ಮಧುರಸದಾ ಸ್ವಾದವು
ಗಡಿಗೆಯ ಮೊಸರಾ ಮರೆಸುತಿದೆ

ಕೃಷ್ಣನ ಕಾಯುತ ಶಿಲೆಯಾದಳು ರಾಧೆ
ಜಾರಿದ ಕಂಬನಿ ಆರುತಿದೆ
ಬತ್ತಿದ ಕೊಳಕೆ ಜೀವವ ತುಂಬಲು
ನೆನಪಿನ ಚಿಲುಮೆಯು ಸೋಲುತಿದೆ.

* * * * * * * *

ಕಾಲೇಜು ದಿನಗಳಲ್ಲಿ ಕವನವೆಂದರೆ ಪ್ರೇಮ. ಪ್ರೇಮವೆಂದರೆ ರಾಧಾ-ಕೃಷ್ಣ. ಹೆಚ್ ಎಸ್ ವೆಂಕಟೇಶಮೂರ್ತಿಯವರ ಕವನ, ಅನಂತಸ್ವಾಮಿಯವರ ಭಾವಗೀತೆ ಎಲ್ಲಾ ರಾಧಾ-ಕೃಷ್ಣರಾಗಿ, ಪ್ರೇಮವಾಗಿ ಕಾಡುತ್ತಿದ್ದ ಕಾಲ. ಬರಹದ ಮೊದಲ ಸಾಲುಗಳು ಚಿಗುರು ಮೀಸೆಯಂತೆ ಮೂಡುತ್ತಿದ್ದ ದಿನಗಳು. 2006ರ ಸಂಜೆಯೊಂದರಲ್ಲಿ ಬೀಸುವ ಗಾಳಿ ಎದೆಯಲ್ಲಿ ತಂದೆಸೆದ ಭಾವಗಳೇ ಕವನವಾಗಿ ಮೂಡಿ, ಈಗ ಇಲ್ಲಿ ಸಮುದ್ರ ತೀರದ ಅಲೆಯ ಒಲುಮೆಯಾಗಿ ನಿಮ್ಮೆದುರು ರೆಕ್ಕೆ ಬಿಚ್ಚಿದೆ.
ಓದುವ ಪ್ರೀತಿಯಿರಲಿ. ಅಕ್ಷರ ನಮ್ಮೆಲ್ಲರ ಬೆಳೆಸಲಿ, ಬೆಳಗಿಸಲಿ.

* * * * * * * *

 (ಬಣ್ಣ ಬಣ್ಣದ ಅಕ್ಷರಗಳ, ಚಿತ್ರಗಳಿಂದ ತುಂಬಿದ ಕಲ್ಪನಾ ವಿಹಾರಕ್ಕೆ ಭೇಟಿ ನೀಡಿ –  http://samudrateera.blogspot.in/)

Advertisements
 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 
%d bloggers like this: