RSS

ಕೊಳಲ ಮರೆತ ಮೋಹನಾ….

31 ಆಕ್ಟೋ

ದೇವಾಮೃತಗಂಗೆ//ರಘುನಂದನ ಕೆ.

ಯಾವುದೋ ರಾಗ ಯಾವುದೋ ತಾಳ
ಯಾವುದು ತಿಳಿಯದ ಮಾಧುರ್ಯ
ಮೋಹನ ಮುರುಳಿಯ ಯಾವ ಗಾನ
ಸೃಷ್ಟಿಯಲಿ ತುಂಬಿದೆ ಸೌಂದರ್ಯ

ರಾಧೆಯ ಕಂಗಳ ಕಂಬನಿ ಬಿಂದುವು
ಕೃಷ್ಣನ ಪಾದಕೆ ಅಭಿಷೇಕ
ಬೃಂದಾವನದಲಿ ಬೀಸುವ ತಂಗಾಳಿ
ಹೊತ್ತು ತಂದಿದೆ ಸ್ವರ ರಸಪಾಕ

ಹೃದಯದಿ ಉಲಿಯುವ ಕೊಳಲಾ ನಾದ
ಕೃಷ್ಣನ ನೆನಪಾ ಕರೆಯುತಿದೆ
ಜೀವ ಭಾವದೊಳು ಜೊತೆಯಾದವನಾ
ಕಾಣದೆ ಉಸಿರು ಸೋಲುತಿದೆ

ಶಂಖ ಚಕ್ರವ ಹಿಡಿದಾ ಕೈಗಳು
ಮರೆತವೇ ನವಿಲುಗರಿಯಾ ಬಣ್ಣಗಳ
ಸಾಗರ ತೀರದ ಅರಮನೆಯೊಳಗೆ
ಮರೆಯಿತೆ ಯಮುನೆಯ ಅನುರಾಗ

ಕೊಳಲ ಮರೆತು ಹೋದನು ಮೋಹನ
ರಾಧೆಯ ನೆನಪಾದರೂ ಜೊತೆಗುಂಟೇ
ಕೊಳದಾ ತಡಿಯಲಿ ಕೃಷ್ಣನ ನೆನಪು
ರಾಧೆಯ ವಿರಹಕೆ ಕೊನೆಯುಂಟೇ…?

* * * * * * *

ಹೆಚ್ ಎಸ್ ವೆಂಕಟೇಶ ಮೂರ್ತಿಯವರ ಕೃಷ್ಣನ ಕವನ ಭಾವಗೀತೆಗಳನ್ನ ಕೇಳುವಾಗೆಲ್ಲ ನಾನೂ ಕೃಷ್ಣನ ಕುರಿತು ಬರೆಯಬಹುದಾ ಅಂತೆಲ್ಲ ಊಹಾಲೋಕದಲ್ಲಿ ವಿಹರಿಸುತ್ತಿದ್ದ ಕಾಲವೊಂದರಲ್ಲಿ ಅರಳಿದ್ದ ಕವನವಿದು. ತುಂಬಾ ಹಿಂದೆ 2006ರಲ್ಲಿ ಕಾಲೇಜು ದಿನಗಳಲ್ಲಿ ಬರೆದಿದ್ದ ಈ ಕವನವನ್ನ ಇಲ್ಲಿ ಸಿಂಗರಿಸಬೇಕೆನ್ನಿಸಿತು, ಹಾಕಿದ್ದೇನೆ. ಅಕ್ಷರ – ಓದು ನಮ್ಮೆಲ್ಲರ ಸದಾ ಕಾಡುತ್ತಿರಲಿ.

 (ಬಣ್ಣ ಬಣ್ಣದ ಅಕ್ಷರಗಳ, ಚಿತ್ರಗಳಿಂದ ತುಂಬಿದ ಕಲ್ಪನಾ ವಿಹಾರಕ್ಕೆ ಭೇಟಿ ನೀಡಿ –  http://www.samudrateera.blogspot.in/)

Advertisements
 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: